ಅವಕಾಶ ಸಿಕ್ಕರೆ ಶಿವಣ್ಣನೊಂದಿಗೆ ಸಿನಿಮಾ ಮಾಡುವೆ ಎಂದ 2.0 ನಿರ್ದೇಶಕ ಶಂಕರ್

ಶಂಕರ್ ನಿರ್ದೇಶನದ ಬಹುಕೋಟಿ ವೆಚ್ಚದ ಚಿತ್ರ 2.0 ಟ್ರೈಲರ್ ಬಿಡುಗಡೆಯ ಸಮಾರಂಭ ನೆನ್ನೆ ಚೆನ್ನೈನ ಸತ್ಯಂ ಥೀಯೇಟರ್ ನಲ್ಲಿ ನಡೆಯಿತು. ಈ ವೇಳೆ ಭಾರತದ ಸುಪ್ರಸ್ಸಿದ್ಧ ಕಲಾವಿದರು ಆನ್ಲೈನ್ ಮುಖಾಂತರ 2.0 ತಂಡಕ್ಕೆ  ಶುಭಕೋರಿದರು. ಕನ್ನಡದ ಹಿರಿಯ ನಟ ಶಿವರಾಜ್ ಕುಮಾರ್ ಮಾತನಾಡಿ ತಂಡಕ್ಕೆ ಶುಭಕೋರಿದರಲ್ಲದೆ, ಶಂಕರ್ ರವರ ನಿರ್ದೇಶನದಲ್ಲಿ ಅಭಿನಯಿಸುವ ಇಚ್ಛೆ ವ್ಯಕ್ತಪಡಿಸಿದರು. 


ಇದಕ್ಕೆ ಉತ್ತರವಾಗಿ ನಿರ್ದೇಶಕ ಶಂಕರ್, "ಶಿವಣ್ಣರಂತಹ ಸೂಪರ್ ಸ್ಟಾರ್ ನನ್ನೊಂದಿಗೆ ಕೆಲಸ ಮಾಡಲು ಬಯಸುತ್ತೇನೆ ಎಂದು ಹೇಳಿರುವುದು ಬಹಳ ದೊಡ್ಡ ವಿಚಾರ. ಅವಕಾಶ ಸಿಕ್ಕಿದಲ್ಲಿ ಮುಂದೊಂದು ದಿನ ಖಂಡಿತ ಅವರೊಂದಿಗೆ ಕೆಲಸ ಮಾಡುತ್ತೇನೆ" ಎಂಬುದಾಗಿ ಹೇಳಿದರು. 

Comments

Popular Posts