ಉಪೇಂದ್ರಾರ ಆ ಸಿನಿಮಾದಿಂದ ಸ್ಪೂರ್ತಿ ಪಡೆದಿದ್ದೇನೆ: 2.0 ನಿರ್ದೇಶಕ ಶಂಕರ್
ಶಂಕರ್ ನಿರ್ದೇಶನದ ಬಹುಕೋಟಿ ವೆಚ್ಚದ ಚಿತ್ರ 2.0 ಟ್ರೈಲರ್ ಬಿಡುಗಡೆಯ ನಿಮಿತ್ತ ಭಾರತದ ಸುಪ್ರಸ್ಸಿದ್ಧ ಕಲಾವಿದರು ಆನ್ಲೈನ್ ಮುಖಾಂತರ ಪಾಲ್ಗೊಂಡು ಶುಭಕೋರಿದರು. ಕನ್ನಡದ ರಿಯಲ್ ಸ್ಟಾರ್ ಉಪೇಂದ್ರರವರು ಮಾತನಾಡಿ ತಂಡಕ್ಕೆ ಶುಭಕೋರಿದರಲ್ಲದೆ, ತಮ್ಮ ನಿರ್ದೇಶನಕ್ಕೆ ಹಾಗು ನಟನೆಗೆ ಸಹಾಯವಾಗುವಂತೆ ಶಂಕರ್ ಹಾಗು ರಜಿನಿಕಾಂತ್ ರವರ ಬಳಿ ಟಿಪ್ಸ್ ಕೇಳಿದರು.
ಇದಕ್ಕೆ ಉತ್ತರ ನೀಡಿದ ಸೂಪರ್ ಸ್ಟಾರ್ ನಿರ್ದೇಶಕ ಶಂಕರ್. ಉಪೇಂದ್ರ ರವರು ಅತ್ತ್ಯತ್ತಮ ನಿರ್ದೇಶಕರೆಂದು, ಅವರ ಉಪೇಂದ್ರ ಹಾಗು 'ಏ' ಚಿತ್ರಗಳನ್ನು ನೋಡಿರುವುದಾಗಿಯೂ ಹೇಳಿದರು. ಅಲ್ಲದೆ ತಮ್ಮ ಚಿತ್ರಗಳಿಗೆ ಚಿತ್ರಕಥೆ ರೂಪಿಸುವಾಗ, ಉಪೇಂದ್ರ ರವರ ಚಿತ್ರಗಳ ಬಗ್ಗೆ ತಮ್ಮ ಸಹಾಯಕರೊಂದಿಗೆ ಚರ್ಚಿಸುವುದಾಗಿಯೂ ಹೇಳಿದರು. ಆರಂಭದಲ್ಲೇ ಕ್ಲೈಮ್ಯಾಕ್ಸ್ ಅನುಭವ ನೀಡುವ 'ಏ' ಚಿತ್ರ ತಮಗೆ ಸ್ಪೂರ್ತಿ ಎಂಬುದಾಗಿಯೂ ಅವರು ಸಮಾರಂಭದಲ್ಲಿ ಹೇಳಿದರು.
Comments
Post a Comment